ಆಸ್ಟ್ರೇಲಿಯನ್ ನ್ಯೂಗಿನಿ
	
ಆಸ್ಟ್ರೇಲಿಯದ ಆಡಳಿತಕ್ಕೊಳಪಟ್ಟಿರುವ ಬಾಪುಅ ಪ್ರದೇಶವನ್ನು ಬ್ರಿಟಿಷರ ನ್ಯೂಗಿನಿ ಎಂದು ಹಿಂದೆ ತಿಳಿಯಲಾಗಿದ್ದುದು ಮತ್ತು ವಿಶ್ವಸಂಸ್ಥೆಯ ಪರವಾಗಿ ಆಸ್ಟ್ರೇಲಿಯದ ಆಡಳಿತಕ್ಕೊಳಪಟ್ಟಿರುವ ನ್ಯೂಗಿನಿಯ ಟ್ರಸ್ಟ್ ಪ್ರದೇಶವನ್ನೂ ಒಳಗೊಂಡಿದೆ. ಪಶ್ಚಿಮದಲ್ಲಿರುವ ನ್ಯೂಗಿನಿ ಇಂಡೊನೇಷ್ಯಕ್ಕೆ ಸೇರಿದ್ದು. ಸಮಭಾಜಕ ವೃತ್ತದಿಂದ 120 ಅಕ್ಷಾಂಶದ ಮತ್ತು 1410 ಮತ್ತು 160 ಪೂರ್ವ ರೇಖಾಂಶಗಳ ಮಧ್ಯದಲ್ಲಿದೆ. ಒಟ್ಟು ವಿಸ್ತೀರ್ಣ 1,83,000 ಚ. ಮೈ. ಜನಸಂಖ್ಯೆ 2,020,000 (1962), 26,000 ಜನ ಸ್ಥಳೀಯ ನಿವಾಸಿಗಳಲ್ಲ. ಪ್ರದೇಶದ ಒಳಭಾಗ ಹೆಚ್ಚಾಗಿ ಪರ್ವತಮಯವಾಗಿದೆ ಅಥವಾ ತೀರದ ಜೌಗು ಪ್ರದೇಶವಾಗಿದೆ. ತೋಟಗಾರಿಕೆ ವ್ಯವಸಾಯದಿಂದ ಕೊಬ್ಬರಿ ಮತ್ತು ರಬ್ಬರನ್ನು ಉತ್ಪಾದಿಸುತ್ತಾರೆ. ಕಾಫಿ ಬೆಳೆ ಮಧ್ಯದ ಎತ್ತರದ ಪ್ರದೇಶಗಳಲ್ಲಿ ಹೆಚ್ಚು. ಚಿನ್ನವನ್ನು ಹೆಚ್ಚಾಗಿ ತೆಗೆಯುತ್ತಾರೆ. ಜವಾಬ್ದಾರಿ ಸರ್ಕಾರವನ್ನು ಸ್ಥಾಪಿಸಲು ಇತ್ತೀಚೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿನಿಧಿಸಭೆಗೆ ಪ್ರಥಮ ಬಾರಿಗೆ 1964ರಲ್ಲಿ ಚುನಾವಣೆ ನಡೆಯಿತು. ಪೋರ್ಟ್ ಮೋರ್ಸ್ ಬಿ ಆಡಳಿತಕೇಂದ್ರ ಮತ್ತು ಮುಖ್ಯ ಪಟ್ಟಣ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ